ಸ್ವತಂತ್ರ ಕಾನೂನು ಸಹಾಯಕ (ನ್ಯಾಯಶಾಸ್ತ್ರ ಪ್ರವೀಣ್ಯ)

Mbyllur Postuar 5 vite mё parё Paguhet në dorëzim
Mbyllur Paguhet në dorëzim

ಸ್ವತಂತ್ರ ಕಾನೂನು ಸಹಾಯಕ (ನ್ಯಾಯಶಾಸ್ತ್ರ ಪ್ರವೀಣ್ಯ)

ಕೆಲಸದ ವಿವರ

ಶೀರ್ಷಿಕೆ, ದಾಖಲೆ, ಪತ್ರಗಳು ಮತ್ತು ಕಾನೂನು ಮಾಹಿತಿಗಳನ್ನು ಪರಿಶೀಲಿಸಿ ಬುದ್ಧಿವಂತಿಕೆಯಿಂದ ವಿಶ್ಲೇಷಣೆ ಮಾಡಬೇಕು

ಪ್ರಚಲಿತ ಕಾನೂನಿನ ಅನುಸರಣೆಗಳನ್ನು ನಿರ್ಧರಿಸಿ ಮತ್ತು ಪ್ರಕರಣಗಳಲ್ಲಿನ ತೊಡಕುಗಳನ್ನು ಕ್ರಮಬದ್ಧವಾಗಿ ಗುರುತಿಸಿ ಮುಂದಿನ ಕ್ರಮ ಕೈಗೊಳ್ಳುವ ಸಲಹೆಯನ್ನು ಕೊಡಬೇಕು.

ಪ್ರಕರಣಗಳ ದಾವ ಸಾರಾಂಶಗಳನ್ನು ವಿಮರ್ಷಿಸಿ, ಪ್ರಸ್ತುತಿಗಾಗಿ ವಾದಗಳನ್ನು, ಮನವಿಗಳನ್ನು, ಅರ್ಜಿಗಳನ್ನು ರಚಿಸಬೇಕು.

ತೀರ್ಪುಗಳಲ್ಲಿನ ತಪ್ಪುದಾರಿಗೆಳೆಯುವ ಅಂಶಗಳನ್ನು ಗ್ರಹಿಸುವ, ವಿವೇಚನೆಯಿಂದ ಅಪರಾಧಗಳನ್ನು ನಿರ್ಣಯಿಸುವ ಸಾಮರ್ಥ್ಯ, ವಾಸ್ತವಿಕ ಮತ್ತು ಸ್ಪಷ್ಟವಾದ ಗ್ರಹಿಕೆಯೊಂದಿಗೆ ಸತ್ಯಗಳನ್ನು ನಿಖರವಾಗಿ ಪ್ರತಿಬಿಂಬಿಸುವ ಮೇಲ್ಮನವಿಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರಬೇಕು.

ಅಪರಾಧ ಮತ್ತು ಕಂದಾಯ ಕಾನೂನು, ಮೋಜಣಿ ಮತ್ತು ಪರಿಹಾರ ನಿಯಮಗಳಲ್ಲಿನ (ಕೇಂದ್ರ ಮತ್ತು ರಾಜ್ಯಕ್ಕೆ ಸಂಬಂಧಿಸಿದಂತೆ) ಬೌದ್ಧಿಕ ಒಳನೋಟಗಳನ್ನು ಅರ್ಥೈಸಿ ಮತ್ತು ಕಾರ್ಯತಂತ್ರವನ್ನು ಮಂಡಿಸುವಷ್ಟು ಪ್ರಬುದ್ಧರಾಗಿರಬೇಕು.

ವಿವಿಧ ದಾವೆ ಪ್ರಕರಣಗಳಿಗೆ ಸಂಬಂಧಿಸಿದ ಕಾನೂನಿನ ಸಮರ್ಥ ಜ್ಞಾನ, ಕಾನೂನು ಸಲ್ಲಿಕೆಗಳಲ್ಲಿನ ಅಧಿನಿಯಮಗಳು, ನ್ಯಾಯಾಲಯದ ಕಾರ್ಯವಿಧಾನಗಳ ಅನುಸರಣೆಗೆ ಮನವಿ ಮತ್ತು ಸೂಕ್ತ ದಾಖಲೆಗಳನ್ನು ತಯಾರಿಸುವುದು. ಈ ಬಗ್ಗೆ ಕಾನೂನುಬದ್ಧ ಚೇತರಿಕೆ, ತಡೆಗಟ್ಟುವಿಕೆ, ಕಾರ್ಯಾಲಯ ಮತ್ತು ನ್ಯಾಯಾಲಯಗಳಿಗೆ ಸಂಬಂಧಿಸಿದ ವಿಧಾನಗಳ ಬಗ್ಗೆ ಚೆನ್ನಾಗಿ ತಿಳುವಳಿಕೆ ಇರಬೇಕು. ಕರ್ನಾಟಕದಲ್ಲಿನ ನ್ಯಾಯಾಲಯಗಳು, ನ್ಯಾಯಮಂಡಳಿಗಳು, ಆಯೋಗಗಳು ಮತ್ತು ಕಾನೂನು ಕಾರ್ಯಾಲಯ ಕೆಲಸ ಜ್ಞಾನವನ್ನು ಹೊಂದಿರಬೇಕು.

ಹಕ್ಕುಗಳ ದೃಷ್ಟಿಕೋನದಿಂದ ಪೂರ್ವಭಾವಿಯಾಗಿ ವಿಷಯಗಳನ್ನು ಗ್ರಹಿಸಿ; ಅನುಕ್ರಮವಾಗಿ ಲೋಕಯುಕ್ತ ನಿಯಮಗಳ ಅಡಿಯಲ್ಲಿ ಸೂಕ್ತ ಭ್ರಷ್ಟಾಚಾರ ನಿಗ್ರಹ ಮತ್ತು / ಅಥವಾ ಅನುಚಿತ ಮೊಕದ್ದಮೆ ಹೂಡುವುದಕ್ಕೆ' ಸೂಕ್ತವಾದ ಅರ್ಜಿಗಳನ್ನು ರಚಿಸುವ ಪ್ರವೀಣ್ಯ ಹೊಂದಿರಬೇಕು.

ಪ್ರಕರಣಗಳು ಮೋಸಗಾರಿಕೆ, ದಗಾ, ಮತ್ತು ವಂಚನೆ, ಅಪರಾಧಗಳನ್ನು ಒಳಗೊಂಡಿರುತ್ತವೆ ಹಾಗು ಪ್ರಮುಖ ವಿವಾದಗಳು ಹಕ್ಕುಗಳ ಪುನಃಸ್ಥಾಪನೆ ಮತ್ತು ಪರಿಹಾರಗಳನ್ನು ಪಡೆಯುವುದು ಸಹ ಒಳಗೊಂಡಿವೆ.

ಅರ್ಹತೆ

ಸ್ಥಳೀಯ ಕನ್ನಡ ಭಾಷೆಯ ನಿಖರವಾದ ಜ್ಞಾನ ಅತ್ಯಗತ್ಯ

ನೈತಿಕ ಬದ್ಧತೆ, ಮೌಲ್ಯ ಸಮಗ್ರತೆ, ಪ್ರಾಮಾಣಿಕತೆ ಮತ್ತು ಗೌಪ್ಯತೆಯನ್ನು ಹೊಂದಿರುವವರು ಮಾತ್ರ ತೊಡಗಿಸಿಕೊಳ್ಳಲಾಗುವುದು.

ವಿಶ್ವಾಸಾರ್ಹ ಮತ್ತು ಸಮಂಜಸವಾದ ವೆಚ್ಚದಲ್ಲಿ ಸೇವೆಗಳನ್ನು ನಿರೀಕ್ಷಿಸಲಾಗಿದೆ

ಕಾನೂನು ಶಾಸ್ತ್ರದ ಸ್ನಾತಕೋತ್ತರ ಪದವೀಧರರು ಬರೆಯುವ ಆಸಕ್ತಿ ಹೊಂದಿರ ಬೇಕು.

ನಿಯೋಜನೆ ಆಧಾರದ ಮೇಲೆ ಭತ್ಯೆ ಪಾವತಿಸಿಲಾಗುವುದು.

ಸ್ಥಳ: ಬೆಂಗಳೂರು, ನಿಮ್ಮ ಮನೆಯಿಂದ ಕೆಲಸ ಮಾಡಬಹುದು.

Kërkime ligjore Shkrim Ligjor Paralegal Services

ID Projekti: #18748519

Rreth projektit

Projekti në distancë Aktiv 5 vite mё parё